ಗ್ವಾಡರ್ -
ಪಾಕಿಸ್ತಾನದ ಒಂದು ಬಂದರು. ಅರಬ್ಬೀ ಸಮುದ್ರದ ಮಕ್ರಾನ್ ತೀರದಲ್ಲಿ (ಬಲೂಚಿಸ್ತಾನ), ಕರಾಚಿಯಿಂದ ಪಶ್ಚಿಮಕ್ಕೆ 187 ಮೈ. ದೂರದಲ್ಲಿ ಇದೆ. ಜನಸಂಖ್ಯೆ 8,146 (1961). ಗ್ವಾಡರ್ ಕೊಲ್ಲಿಯ ಪೂರ್ವಭಾಗದಲ್ಲಿ ರಾಸ್‍ನುಹ್ ಪರ್ಯಾಯದ್ವೀಪದ ಕಿರಿದಾದ ಪ್ರದೇಶದ ಬಂಡೆಯ ಪ್ರಪಾತದ ಕೆಳಗಿದೆ. ಇದು ಭಾರತ-ಪಾಕಿಸ್ತಾನಗಳಿಂದ ಪರ್ಷಿಯನ್ ಖಾರಿಗೂ ಯುರೋಪಿಗೂ ಹೋಗುವ ತಂತಿ ಮಾರ್ಗದ ಮಧ್ಯದಲ್ಲಿದೆ.

ಗ್ವಾಡೆರನ್ನೂ ಮಕ್ರಾನ್ ತೀರದ ಇತರ ಪಟ್ಟಣಗಳನ್ನೂ 1797 ರಲ್ಲಿ ಮಸ್ಕತ್ ಸುಲ್ತಾನ ಇಬು ಅಹಮ್ಮದ್ ಗ್ವಾಡರ್ ವಶಪಡಿಸಿಕೊಂಡಿದ್ದ. ಮುಂದೆ ಇವನ ರಾಜ್ಯ ಗ್ವಾಡರ್ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿತ್ತು. 1958 ರಲ್ಲಿ ಇದು ಪಾಕಿಸ್ತಾನಕ್ಕೆ ಸೇರಿತು. ಗ್ವಾಡರಿನಿಂದ ಮೀನು, ಖರ್ಜೂರ, ಉಣ್ಣೆ ರಫ್ತಾಗುತ್ತದೆ.
(ವಿ.ಎಸ್.ಬಿಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ